ಇದು ನನ್ನದಲ್ಲದ ಪ್ರಪಂಚ
ಎಂದೂ ನನ್ನದೆನಿಸದ ಬದುಕು
ಇಲ್ಲಿ ಎಲ್ಲವೂ ಮೀರಬಾರದ ಎಲ್ಲೇ
ಮತ್ತು ನಿರಾಕರಿಸಲಾಗದ ಹಣೆಬರಹ
ಬದಲಿಸುವವರಾರು ?
ಎಲ್ಲಾ ನೋವನ್ನೂ ಹಂಚಲಾಗದಿಲ್ಲಿ
ನಮಗದು ಸ್ವಯಾರ್ಜಿತ
ನಾವೇ ಸೃಷ್ಟಿಸಿದ ಸಮಸ್ಯೆಗಳಿಗೆ
ನಾವಷ್ಟೇ ಆಗಬಲ್ಲೆವು ಪರಿಹಾರ
ಗಮ್ಯ ತಿಳಿಯದೆ ಸಾಗುತಿದೆ
ಬಾಳ ಹಾದಿಯಲಿ ಹೆಜ್ಜೆಗಳು
ಇದು ನನಾ ದಾಟಬಾರದ ಪರಿಧಿ
ಯಾರದ್ದೋ ಪರಭಾರೆಗೆ ಬಲಿಯಾಗಿ
ಕಳಕೊಂಡಿದ್ದು ತನ್ನತನ
ಭಾವುಕತೆ ವರವೋ ಶಾಪವೋ
ಹುಡುಕಿದರೂ ಉತ್ತರ ಸಿಗುತ್ತಿಲ್ಲ
ಮುಚ್ಚಿದ ಬಾಗಿಲ ಹಿಂದೆ ಬಹುಶಃ
ತೆರೆದಿಡಲಾಗದ ನೋವಿಹುದೇನೋ
ಮೌನ ಸಂಭಾಷಣೆಗೆ ಅನುವಾದಕರಿಲ್ಲ
ನೋವಿಲ್ಲದೆ ಒಲವು ಸಿಗದಿಲ್ಲಿ
ಕಳೆದುಕೊಂಡವರ ಬದುಕೆಂದರೆ...
ಬರೀ ನೆನಪುಗಳಷ್ಟೇ ತಾನೇ
ಅದಕ್ಕೇನು ? ನೆನಪಲ್ಲೇ ಬದುಕಿದರಾಯ್ತು ...
No comments:
Post a Comment